ಕದಂಬರ ಮಯೂರವರ್ಮನ ಕಥೆ
ಕದಂಬರ ಮೂಲ ಪುರುಷನಾದ ವೀರ ಮಯೂರವರ್ಮ (ಕ್ರಿ.ಶಕ. ೩೩೨ – ೩೬೦)
ಮಯೂರ ಶರ್ಮನ ಊರು ತಾಳಗುಂದ ಎಂಬುದು. ಇದು ಶಿವಮೊಗ್ಗೆ ಜಿಲ್ಲೆಯಲ್ಲಿದೆ. ಇವರ ಮನೆ ಅಂಗಳದಲ್ಲಿ ಕದಂಬ ಅಂದರೆ ಕಡಿವಾಲಮರವಿದ್ದುದರಿಂದ ಇವರಿಗೆ ಕದಂಬರೆಂದು ಅಡ್ಡ ಹೆಸರು ಇತ್ತು. ಚಿಕ್ಕಂದಿನಲ್ಲಿ ಮಯೂರನು ತನ್ನ ಗುರು ವೀರಶರ್ಮನೊಡೆನೆ ಕಂಚಿಗೆ ವೇದಾಧ್ಯಯನಕ್ಕಾಗಿ ಹೋದನು. ಕಂಚಿಯಲ್ಲಿ ಆಗ ದೊಡ್ಡ ವಿದ್ಯಾಪೀಠವಿತ್ತು. ಮೇಲಾಗಿ ಅದು ಪಲ್ಲವರ ರಾಜಧಾನಿ. ಅಲ್ಲಿ ಮುಯೂರಶರ್ಮನು ಓದುತ್ತಿರುವಾಗ ನಡೆದ ಸಂಗತಿ.
ಆಗ ಮೆಯೂರನು ೧೮-೨೦ ವರ್ಷದವನು. ಕಂಚಿಯ ಪಾಠಶಾಲೆ ಯಲ್ಲಿ ವೇದ-ಶಾಸ್ತ್ರಗಳ ಅಭ್ಯಾಸ ಮಾಡುತ್ತಲಿದ್ದ. ಪಲ್ಲವರು ಕ್ಷತ್ರಿಯರು. ಆಗಾಗ್ಗೆ ಅಶ್ವನೇಧ ಯಜ್ಞಗಳನ್ನು ಮಾಡುತ್ತಿದ್ದರು. ಮಯೂರನು ಅಲ್ಲಿರುವಾಗೊಮ್ಮೆ ಅಶ್ವಮೇಧದ ವಿಷಯವಾಗಿ ವಾದನಡೆದು ಜಗಳವಾಯಿತು. ಈ ಜಗಳದ ವೃತ್ತಾಂತವನ್ನು ಮಯೂರನು ಅರಸನ ಮುಂದೆ ಹೇಳ ಹೋದನು. ಅರಸನು ಲೆಕ್ಕಿಸದೆ, ಅವನನ್ನು ಹೊರಗೆ ಹಾಕಿಸಿದನು. ಇದರಿಂದ ಮಯೂರನು ಕಿಡಿಕಿಡಿಯಾಗಿ, ಕ್ಪತ್ರಿಯರ ಮುಂದೆ ಬ್ರಾಹ್ಮಣರು ಬಗ್ಗ ಬೇಕಾಯಿತಲ್ಲ? ಎಂದು ಬಹು ಬಗೆಯಿಂದ ಮಿಡುಕಿದನು. ತನ್ನ ಕೈಯೊಳಗಿರುವ ಬ್ರಾಹ್ಮಣರಿಗೆ ಯೋಗ್ಯವಾದ ಕುಶ-ಸಮಿತ್ತುಗಳನ್ನು ಬಿಸಾಕಿ, ಕೈಯಲ್ಲಿ ಶಸ್ತ್ರ ಹಿಡಿದು ತನ್ನದೊಂದು ಸ್ವತಂತ್ರ ರಾಜ್ಯವನ್ನೇ ಸ್ಥಾಪಿಸಬೇಕೆಂದು ನಿಶ್ಚಯಿಸಿದನು.
ಆಗ ಮಯೂರನು ಕಂಚಿಯನ್ನು ಬಿಟ್ಟನು. ತನ್ನ ಗುರಿಯನ್ನು ಸಾಧಿಸಲು ಪಲ್ಲವ ರಾಜ್ಯದ ಸೀಮೆಯಾಗಿದ್ದ ಶ್ರೀಶೈಲಸರ್ವತವನ್ನು ಸೇರಿದನು. ಅಲ್ಲಿರುವ ಕಾಡು ಜನರೊಡನೆ ಸ್ನೇಹ ಬೆಳೆಸಿದನು. ಅವರನ್ನೆಲ್ಲ ಕಲೆ ಹಾಕಿ, ಅವರಿಗೆ ತಾನೇ ಮುಂದಾಳಾಗಿ, ಪಲ್ಲವರ ಅಂತವಾಲರನ್ನು ಗೆದ್ದು, ಬೃಹದ್ಬಾಣ ಮೊದಲಾದ ಮಾಂಡಲಿಕರಿಂದ ಕಪ್ಪ-ಕಾಣಿಕೆಯನ್ನೆತ್ತಿದನು. ಇದರಿಂದ ಮಯೂರರಿಗೆ ಸ್ವಲ್ಪ ಕಸುವು ಬಂದಂತಾಯಿತು. ಆಗ ದಿನದಿನಕ್ಕೆ ಮಯೂರನ ಕೀರ್ತಿಯು ಸುತ್ತು ಕಡೆ ಬೆಳೆಯಕೊಡಗಿತು. ಪಲ್ಲವೇಂದ್ರನ ಕಿವಿಗೂ ಇವನ ಹೆಸರು ಮುಟ್ಟಿತು. ಮೊದಲು ಮೊದಲು ಒಬ್ಬ ಕ್ಷುದ್ರ ಪುಂಡನ ಹಾವಳಿ ಎಂದು ಅವನು ಲೆಕ್ಕಿಸಲಿಲ್ಲ; ಅದರೆ ದಿನಾಲು ಮಯೂರನ ಬಗ್ಗೆ ಒಂದಿಲ್ಲೊಂದು ಗೆಲವಿನ ಸುದ್ದಿಗಳು ಬರಹತ್ತಿದವು. ಕೆಲದಿನಗಳ ಹಿಂದೆ, ಒಬ್ಬ ತೇಜಸ್ವಿಯಾದ ಬ್ರಾಹ್ಮಣ ವಿದ್ಯಾರ್ಥಿಯು ಅಶ್ವಮೇಧ ಯಜ್ಞದ ದೆಸೆಯಿಂದ ಜಗಳವಾಡಿದ್ದು ನೆನಪಿಗೆ ಬಂದು, ಆಗ, ತಾನು ಆತನ ಮುಖದಲ್ಲಿ ಕಂಡ ವರ್ಚಸ್ಸು, ಕಣ್ಣುಗಳಲ್ಲಿ ಹೊಳೆದ ತೇಜಸ್ಸು, ಮೈಯಲ್ಲಿ ಉಕ್ಕುವ ಹುಮ್ಮಸ್ಸು-ಇವೆಲ್ಲವು ಕಣ್ಣಿಗೆ ಕಟ್ಟಿದವು. ಬೆಳೆಯುವ ವೈರಿಯನ್ನು ಅಲಕ್ಷಿಸುವದು ಅರಸನ ಕರ್ತವ್ಯವಲ್ಲ ಎಂಬ ರಾಜನೀತಿಯಂತೆ, ಪಲ್ಲವೇಂದ್ರನು ತನ್ನೊಬ್ಬ ದಂಡನಾಯಕನನ್ನು ಮಯೂರನ ಮಗ್ಗಲು ಮುರಿಯಲು ದಂಡು ಸಹಿತವಾಗಿ ಕಳಿಸಿದರು. ಮಯೂರನು ಆ ದಂಡನಾಯಕನನ್ನೇ ದಂಡಿಸಿದನು; ಕೊನೆಗೆ ಪಲ್ಲವೇಂದ್ರನು ತಾನೇ ದೊಡ್ಡ ಸೈನ್ಯದೊಂದಿಗೆ ಹೋಗಿ ಮಯೂರನನ್ನು ಎದುರಿಸಿದನು; ಆದರೆ ಮಯೂರನಲ್ಲಿದ್ದ ಕೆಚ್ಚೆದೆಯ-ಬಿಚ್ಚುಗತ್ತಿಯ ಮಲ್ಲಾಡಿನ ದಂಡಾಳುಗಳ ಮುಂದೆ ಅವನ ಆಟ ನಡೆಯಲಿಲ್ಲ. ಅವನು ಒಪ್ಪಂದ ಮಾಡಿಕೊಂಡು,ಅವನಿಗೆ ತನ್ನ ದಂಡಾಧಿಪತಿಯ ಪದವಿಯನ್ನು ಕೊಟ್ಟು ಸ್ನೇಹ ಬೆಳೆಯಿಸಿದನು.
“ಕ್ಪತ್ರಿಯ ಕಾರ್ಯ ಕೈಕೊಂಡನಂತರ ಮಯೂರನು ಶರ್ಮ ಎಂಬ ಬ್ರಾಹ್ಮಣ ಪದವಿಯನ್ನುಬಿಟ್ಟು, ವರ್ಮ ಎಂಬ ಕ್ಷತ್ರಿಯ ಪದವಿ ಧರಿಸಿದನು.”
ಮುಂದೆ ಮಯೂರನು ಪಲ್ಲವರ ಪರವಾಗಿ ನಡೆದ ಹಲವು ಕಾಳಗಗಳಲ್ಲಿ ತೋರಿಸಿದ ಪರಾಕ್ರಮಕ್ಕೆ ಮೆಚ್ಚಿ, ಪಲ್ಲವೇಂದ್ರನು ಪಶ್ಚಿಮದಲ್ಲಿ ಸಮುದ್ರದವರೆಗೂ ರಾಜ್ಯವನ್ನು ಕೊಟ್ಟು ತನ್ನ ಸಾಮಂತರಾಜನನ್ನಾಗಿ ಮಾಡಿಕೊಂಡನು. ಆಗ ಮಯೂರನು ವೈಜಯಂತಿ ಅಂದರೆ ಬನವಸೆ (ಬನವಾಸಿ)ಯನ್ನೇ ತನ್ನ ರಾಜಧಾನಿಯನ್ನಾಗಿರಿಸಿಕೊಂಡು ರಾಜ್ಯವಾಳಿದನು. ಇವನ ಪಟ್ಟಾಭಿಷೇಕಕ್ಕೆ ಪಲ್ಲನೇಂದ್ರನು ಸ್ವತಃ ಕಂಚಿಯಿಂದ ಬಂದಿದ್ದನು. ತನ್ನ ಕೈಯಿಂದ ಮಯೂರನ ತಲೆಯಮೇಲೆ ಕಿರೀಟಿವನ್ನಿಟ್ಟು ಸಮಾರಂಭವನ್ನು ನೆರವೇರಿಸಿದನು. ಇವನ ರಾಜ್ಯವು ಶಿವಮೊಗ್ಗೆ, ಕಾರವಾರ, ಧಾರವಾಡ,ಬೆಳಗಾವಿ ಜಿಲ್ಲೆ ಗಳನ್ನು ಒಳಗೊಂಡಿತ್ತು. ಮಯೂರನ ತರುವಾಯ ಅವನ ಮಗನಾದ ಕಬ್ಬ್ಬವರ್ಮ, ಮೊಮ್ಮಕ್ಕಳು – ಮರಿಮಕ್ಕಳಾದ ಭಗೀರಥ, ರಘು, ಕಕುಸ್ಥ, ಮೃಗೇರವರ್ಮ್ಮ, ರವಿವರ್ಮ ಮೊದಲಾದವರು ಆಳಿದರು.