ಶಾಂತಿಪ್ರಿಯನಾದ ರಾಷ್ಟ್ರಕೂಟರ ನೃಪತುಂಗ
ಇವನು ರಾಷ್ಟ್ರಕೂಟ ಗೋವಿಂದನ ಮಗ, ಅವನ ತರುವಾಯ ಪಟ್ಟಕ್ಕೆ ಬಂದನು.
ವೀರ್ಯ, ಶೌರ್ಯ,ವಿದ್ಯೆ, ಧರ್ಮಪ್ರೀತಿ, ಇವುಗಳಲ್ಲಿ ರಾಷ್ಟ್ರಕೂಟ ಅರಸರಲ್ಲಿ ನೃಪತುಂಗನೇ ಮೇಲು. ಇವನಿಗೆ೧ನೆಯ ಅಮೋಘವರ್ಷ ಎಂದು ಹೆಸರು. ಇವನು ತೀರ ಚಿಕ್ಕವನಿರುವಾಗ ತಂದೆ ಗೋವಿಂದನು ತೀರಿಕೊಂಡ. ಗುಜರಾತದಲ್ಲಿ ಆಳುತ್ತಿದ್ದ ಗೋವಿಂದನ ತಮ್ಮನಾದ ಇಂದ್ರನ ಮಗ ಸುವರ್ಣವರ್ಷನು, ಕಕ್ಕ ಗೋವಿಂದನು ಸಾಯುವ ಕಾಲಕ್ಕೆ ಹತ್ತಿರವೇ ಇದ್ದನು. ಮಗನು ಚಿಕ್ಕವ, ಆದುದರಿಂದ ಅನನನ್ನೂ ಸಾಮ್ರಾಜ್ಯವನ್ನ್ಮೂ ಕಾಯ್ದುಕೊಂಡು ಹೋಗುವ ಭಾರ ನಿನ್ನದೇ ಎಂದು ಗೋವಿಂದನು ಸುವರ್ಣ ವರ್ಷನಿಗೆ ಎಲ್ಲ ಭಾರ ಒಪ್ಪಿಸಿದನು. ಇಂದ್ರನು ಸಮರ್ಥನಿದ್ದನು; ಆದರೂ ನೃಪತುಂಗ ಚಿಕ್ಕವನಿದ್ದುದನ್ನು ಲಕ್ಷಿಸಿ, ಮಾಂಡಲಿಕರಾಗಿದ್ದ ಗಂಗರು ಸ್ವತಂತ್ರರಾದರು, ರಾಜ್ಯದೊಳಗಿರುವ ಚಿಕ್ಕಚಿಕ್ಕ ಪುಂಡ-ಪಾಳ್ಯಗಾರರು ದಂಗೆ ಎಬ್ಬಿಸಿದರು. ಪರಂಪರೆಯಿಂದ ವೈರಿಗಳಾದ ಪಲ್ಲವ, ಜೋಳ, ಮೊದಲಾದ ಅರಸರು ಆಗಾಗ್ಗೆ ದಾಳಿ ನಡೆಸಿದರು.ಕೈಕೆಳಗಿದ್ದ ಮಂತ್ರಿಗಳು ರಾಜ ದ್ರೋಹಿಗಳಾದರು. ಸುವರ್ಣವರ್ಷನು ತನ್ನ ಕಕ್ಕನ ಮಾತನ್ನು ಮರೆಯದೆ, ಎಲ್ಲ ಗೊಂದಲವನ್ನು ಶಾಂತವಡಿಸಿ ರಾಜ್ಯವನ್ನು ಕಾಪಾಡಿದನು. ಅಷ್ಟರಲ್ಲಿ ನೃವತುಂಗನು ದೊಡ್ಡವನಾಗಲು,ಅವನಿಗೆ ರಾಜ್ಯಭಾರ ಒಪ್ಪಿಸಿದನು. ನೃಪತುಂಗನು ಪಟ್ಟಕ್ಕೆ ಬಂದ ನಂತರ, ರಾಜ್ಯದಲ್ಲಿಯ ಚಿಕ್ಕಚಿಕ್ಕ ಬಂಡುಗಾರರು ತಲೆಯೆತ್ತಿದರು. ಪುಂಡರು ಮತ್ತೆ ಗೊಂದಲ ನಡೆಸಿದರು. ತಂದೆ ಇರುವವರೆಗೆ ಒಳ್ಳೆಯ ರಾಜಭಕ್ತಿಯಿಂದ ನಡೆದ ಸರದಾರರೂ ರಾಜ್ಯದಾಸೆಯಿಂದ ದಾರಿತಪ್ಪಿ ನಡೆದರು; ಆಗ ನೃವತುಂಗನು ಆ ಬಂಡಾಯಗಳನ್ನು ಮುರಿಯುವುದರಲ್ಲಿ ತೊಡಗಿದನು.
ಬಂಕೆಯರಸ ಎಂಬ ಮುಖ್ಯ ದಳವಾಯಿಯು ನೃಪತುಂಗನಿಗೆ ಬಹಳಮಟ್ಟಿಗೆ ನೆರವಾದನು. ಮತ್ತು ಅವನೂ ಅಲ್ಲಲ್ಲಿ ದಂಡು ಕಟ್ಟಿ ಕೊಂಡು ಹೋಗಿ ಬಂಡಾಯ ಮುರಿದನು. ಅದರಿಂದ ಸಂತುಷ್ಟನಾಗಿ ನೃಪತುಂಗನು ಬಂಕೆಯರಸನನ್ನು ಬನವಸೆ, ಬೆಳಗೊಳ, ಕುಂದರಿಗೆ, ಕುಂದೂರು, ಪುಲಿಗೆರೆ ನಾಡುಗಳಿಗೆ ಅಧಿಪತಿಯನ್ನಾಗಿ ಮಾಡಿದನು. ತರುವಾಯ, ತಾನು ಸ್ವತಃ ಗುಜರಾತದ ಅರಸನ ಮೇಲೆ ದಾಳಿ ಮಾಡಿ ಅವನಿಂದ ಕಪ್ಪವೆತ್ತಿದನು; ಹಾಗೆಯೇ ಮುಂದೆ ನಡೆದು ಅಂಗ, ವಂಗ, ಕಳಿಂಗ ಅರಸರಿಂದಲೂ ಕಪ್ಪ-ಕಾಣಿಕೆಗಳನ್ನು ತೆಗೆದುಕೊಂಡು, ಅಲ್ಲಿಂದ ವೆಂಗಿಯ ಚಾಲುಕ್ಯ ಅರಸನನ್ನು ಸೋಲಿಸಿದನು. ತಲಕಾಡಿನ ಗಂಗರಸರೊಡನೆ ಸ್ನೇಹ ಬೆಳೆಯಿಸಿ, ತನ್ನ ಮಗಳನ್ನು ಬೂತುಗರಾಯನಿಗೆ ಕೊಟ್ಟು ಬೀಗತನ ಮಾಡಿದನು. ಚಾಲುಕ್ಯರನ್ನು ಮುರಿದು ತನ್ನ ರಾಜ್ಯ ಬೆಳೆಯಿಸಿಕೊಂಡಿದ್ದರಿಂದ ಮೊದಲು ಸುಮ್ಮನಿದ್ದ ಚಾಲುಕ್ಯರು ಕೆಲ ದಿನಸಗಳ ನಂತರ ಯುದ್ಧಕ್ಕೆ ಸಿದ್ಧರಾದರು. ಇಂಗವಳ್ಳಿಯ ಹತ್ತರ ಪೂರ್ವ ಚಾಲುಕ್ಯರಿಗೂ ರಾಷ್ಟ್ರಕೂಟರಿಗೂ ಯುದ್ಧವಾಯಿತು. ಚಾಲುಕ್ಯರು ಸೋತು ಓಡಿದರು.
ಆಮೇಲೆ, ನೃಪತುಂಗನು ಮಾಳವ ಬೇಶದಿಂದ ಕಂಚಿಯವರೆಗಿರುವ ತನ್ನ ವಿಸ್ತಾರವಾದ ರಾಜ್ಯವನ್ನು ಓರಣಗೊಳಿಸಿದನು. ಒಂದೊಂದು ಪ್ರಾಂತಕ್ಕೆ ಒಬ್ಬೊಬ್ಬ ಪ್ರಬಲ ಅಧಿಪತಿಯನ್ನು ನಿಯಮಿಸಿದನು.ಅಷ್ಟರಲ್ಲಿ ತನ್ನ ಮಗನಾದ ಕೃಷ್ಣನು ದೊಡ್ಡನನಾದ್ದರಿಂದ, ಅವನಿಗೆ ರಾಜಕಾರ್ಯದ ಶಿಕ್ಷಣ ಕೊಟ್ಟು, ಚಿಕ್ಕ ಚಿಕ್ಕ ರಾಜಕಾರ್ಯಗಳನ್ನು ಅವನಿಂದ ಮಾಡಿಸ ಹತ್ತಿದನು. ಮುಂದೆ. ಮುಂದೆ ಮಗನಿಂದ ರಾಜ್ಯಭಾರದಲ್ಲಿ ಇವನಿಗೆ ಶುಂಬಾ ಸಹಾಯವಾಯಿತು.
ತಂದೆ ಅಜ್ಜಂದಿರಂತೆ ನೃವತುಂಗನು ಯುದ್ಧಪ್ರಿಯನಲ್ಲ; ವಿದ್ಯಾ ಪ್ರಿಯನು. ಜಗಳಗಂಟಿನಲ್ಲ; ಶಾಂತಿಪ್ರಿಯನು; ಮತ್ತು ಇವನ ಹಾಕೈಕೆಯಂತೆ ಹೆಚ್ಚಿಗೆ ಯುದ್ಧಗಳೇ ಆಗಲಿಲ್ಲ. ಸಂಸ್ಕೃತ, ಕನ್ನಡ ಕವಿಗಳಿಗೆ ಆಶ್ರಯ ಕೊಟ್ಟನಲ್ಲದೆ ತಾನೂ ಗ್ರಂಧಗಳನ್ನು ಬರೆದನು. ಕನ್ನಡದೊಳಗಂತೂ ನೃಪತುಂಗ ಅರಸನ “ಕವಿರಾಜ ಮಾರ್ಗ’ ಎಂಬ ಅಲಂಕಾರಶಾಸ್ತ್ರ ಗ್ರಂಥವು ಪ್ರಸಿದ್ಧ ವಿದೆ. ಇದು ಕನ್ನಡದಲ್ಲಿಯೇ ಅತಿ ಪ್ರಾಚೀನ ಗ್ರಂಥ, ಈ ಗ್ರಂಥದಲ್ಲಿ ಇವನು ತನ್ನ ಕಾಲಕ್ಕೆ ಕರ್ನಾಟಕದ ಮೇರೆಯು ಕಾವೇರಿಯಿಂದ ಗೋದಾವರಿಯ ನದಿಯವರೆಗೆ ಹೆಬ್ಬಿತ್ತೆಂದು ಹೇಳಿದುವನು; ಮೇಲಾಗಿ, ಲಕ್ಷ್ಮೇಶ್ವರ, ಒಕ್ಕುಂದ, ಕೊಸ್ಟಳ, ಕಿಸು ವೊಳಲು,( ಪಟ್ಟದಕಲ್ಲು) ಈ ಭಾಗದೊಳಗಿನ ಕನ್ನಡವೇ ತಿರುಳುಗನ್ನಡ ಎಂದೂ ನುಡಿದಿರುವನು.
ನೃಪತುಂಗನು ಮಳಖೇಡವೆಂಬುವ ಊರನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ತನ್ನ ರಾಜಧಾನಿಯನ್ನವನು ರಾಜಬೀದಿ, ಅಂದವಾದ ಪೇಟೆಯ ಸಾಲು,ಅಲ್ಲಲ್ಲಿ ಮೆರೆಯುವ ಸರೋವರ, ಅಗ್ರಹಾರ, ಧರ್ಮಶಾಲೆ ಹೂದೋಟ, ಮಠ ಮೊದಲಾದವುಗಳಿಂದ ಇಂದ್ರನ ಎರಡನೆಯ ಅಮರಾವತಿಯಂತೆಸಿಂಗರಿಸಿದ್ದನು. ದಿನಗಳೆದಂತೆ, ನೃಸತುಂಗನಲ್ಲಿ ವೈರಾಗ್ಯ ತಲೆದೋರಿ ಜೀವನದಲ್ಲಿಯ ಸವಿಯು ಹಾರಿತು. ಆಗ, ಅವನು ಧರ್ಮಮತ ಗ್ರಂಥಗಳನ್ನೋದಲಾರಂಭಿಸಿದನು, ಇವನು ಜೈನನಿದ್ದರೂ ವೈದಿಕಮತಕ್ಕೆ ವಿರೋಧಿಯಾಗಿರಲಿಲ್ಲ. ಒಮ್ಮೆ ಮಹಾಲಕ್ಷ್ಮಿದೇವಿಗೆ ಹೆರಕೆಹೊತ್ತು, ತನ್ನ ರಾಜ್ಯದಲ್ಲಿಯ ಬೇನೆಯ ಪಿಡುಗು ದೂರಾದರೆ ಎಡಗೈ ಬೆರಳುಗಳನ್ನು ಕೊಡುವೆನೆಂದು ಬೇಡಿಕೊಂಡನು. ಅದರಿಂದ ಪಾರಾದ ನಂತರ, ತನ್ನ ಎಡಗೈ ಬೆರಳುಗಳನ್ನು ಕಡಿದು ಹಾಕಿದನು. ಧರ್ಮದಲ್ಲಿ ಇವನಿಗೆ ತುಂಬಾ ವಿಶ್ವಾಸ. ತನ್ನ ಕೊನೆಗಾಲದಲ್ಲಿ ಮಗನಿಗೆ ರಾಜ್ಯ ಒಪ್ಪಿಸಿ ಜೈನಗುರುಗಳ ಸಹವಾಸದಲ್ಲಿ ಏಕಾಂತದೊಳಗೆ ಕಾಲಕಳೆಯುತ್ತಿದ್ದನಂತೆ. ಇವನುಅಳಿದ್ದು ೬೫ ವರ್ಷ.