ಮುದ್ದು ಕಂದ – ಜಾನಪದ ಗೀತೆ

ಮುದ್ದು ಕಂದ

ಹಾವಿನ ಹೆಡಿ ಚಂದ | ಮಾವಿನ ಮಿಡಿ ಚಂದ |
ಹಾರಾಡಿ ಬರುವ ಗಿಳಿ ಚಂದ | ನನ ಕಂದ ||
ನೀ ಇದ್ದರೆ ನನ್ನ ಮನಿ ಚಂದ ||

ನನ್ನ ಕಂದ ಮುದ್ದು | ಹೊನ್ನ ತಾವರಿ ಮುದ್ದು |
ಹಣ್ಣುಳ್ಳ ಗಿಡಕ ಗಿಳಿ ಮುದ್ದು | ಕಂದವ್ವ||
ನೀ ಮುದ್ದು ನನ್ನ ಬಳಗಾಕ ||

ಹಸರಂಗಿ ತೊಡಸೀನ | ಹಾಲ್ಗಡಗ ಇಡಸೀನ |
ಹಳ್ಳಕ್ಕ ನೀನು ಬರಬ್ಯಾಡ | ನನಕಂದ ||
ಬೆಳ್ಳಕ್ಕಿ ಹಿಂಡು ಬೆದರ‍್ಯಾವ ||

ಗುಜ್ಜಿ ನನ ಕಂದಯ್ಯನ | ಗೆಜ್ಜೆ ಸಪ್ಪಳ ಕೇಳಿ |
ನಿಬ್ಬಣದೆತ್ತು ಬೆದರ‍್ಯಾವ | ಮದ್ಯಾಣದ ||
ಹುಲ್ಲು ತಿನ್ನೋದ ಮರೆತಾವ ||

ತವರೂರಿಗ‍್ಹೋದಾಗ | ನವಿಲ ಬಣ್ಣದ ಪಕ್ಷಿ |
ತಲಿಬ್ಯಾನಿಯೆದ್ದು ಅಳುತ್ತಿತ್ತ | ಕಂದನ ||
ಚಲುವೀಕಿ ನೋಡಿ ನಗುತಿತ್ತ ||

      Leave a Reply

      Your email address will not be published. Required fields are marked *