ಎ.ಪಿ.ಜೆ. ಅಬ್ದುಲ್ ಕಲಾಂ

ಎ.ಪಿ.ಜೆ. ಅಬ್ದುಲ್ ಕಲಾಂ
ಚಿತ್ರಕೃಪೆ: Bhaskar De, CC BY-SA 4.0 https://creativecommons.org/licenses/by-sa/4.0, via Wikimedia Commons

ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮಿಳುನಾಡಿನ ರಾಮೇಶ್ವರದಲ್ಲಿ ದಿನಾಂಕ ೧೫ ನೇ ಅಕ್ಟೋಬರ್ ೧೯೩೧ ರಂದು ಜನಿಸಿದರು. ಇವರ ಪೂರ್ಣ ಹೆಸರು ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ.

ಕಲಾಂ ಅವರು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಇಸ್ರೋ ಮತ್ತು ಡಿ.ಆರ್.ಡಿ.ಒ.ದಲ್ಲಿ
ಕಾರ್ಯನಿರ್ವಹಿಸಿದರು. ನಂತರ ಭಾರತದ ೧೧ ನೇ ರಾಷ್ಟçಪತಿಯಾಗಿ ೨೨ ನೇ ಜುಲೈ ೨೦೦೨ ರಂದು ಆಯ್ಕೆಯಾದರು.

ಸರಳತೆ, ಪ್ರಾಮಾಣಿಕತೆ ಮತ್ತು ಮೇಧಾವಿತನದಿಂದ ನಡೆದುಕೊಂಡು ರಾಷ್ಟçಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು.


ಲೇಖಕರಾಗಿದ್ದ ಕಲಾಂ ಅವರು ‘ವಿಂಗ್ಸ್ ಆಫ್ ಫೈರ್’ (ಆತ್ಮಕಥೆ), ‘ಇಂಡಿಯಾ ಮೈ ಡ್ರೀಮ್’ ‘ಇಂಡಿಯಾ ೨೦೨೦’, ‘ಮೈ ಜರ್ನಿ’, ‘ಟಾರ್ಗೆಟ್ ತ್ರಿ ಬಿಲಿಯನ್’, ‘ಟರ್ನಿಂಗ್ ಪಾಯಿಂಟ್’, ‘ಇಗ್ನಾಇಟೆಡ್ ಮೈಂಡ್ಸ್’, ‘ದಿ ಲೈಫ್ ಟ್ರೀ’ ಮುಂತಾದ ಕೃತಿಗಳನ್ನು ಬರೆದಿದ್ದಾರೆ.

ಇವು ಭಾರತದ ಹಲವು ಭಾಷೆಗಳಿಗೆ ತರ್ಜುಮೆಗೊಂಡಿವೆ.

ಕಲಾಂ ಅವರ ಸೇವೆಗೆ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದೇಶದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುಮಾರು ೩೦ ವಿಶ್ವವಿದ್ಯಾನಿಲಯಗಳು ಕಲಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ.

ಇವರು ದಿನಾಂಕ ೨೭ ಜುಲೈ ೨೦೧೫ ರಂದು ಉಪನ್ಯಾಸ ನೀಡುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಅಸುನೀಗಿದರು.

Leave a Reply

Your email address will not be published. Required fields are marked *