ಅಭಿಜ್ಞಾನ ಶಾಕುಂತಲ – ಕಾಳಿದಾಸ

ತಾಪಸಿ– ಸರ್ವದಮನ, ಈ ಮರಿಯನ್ನು ನೀನು ಬಿಡದಿದ್ದರೆ ಇದರ ತಾಯಿ ನಿನ್ನ ಮೇಲೆ ಹಾರಿಬಿಡುತ್ತದೆ.

ಬಾಲಕ– (ನಸುನಕ್ಕು)ಅಬ್ಬ! ನನಗೆ ಬಹಳ ಹೆದರಿಕೆಯಾಗುತ್ತದೆ!

ತಾಪಸಿ– ಮಗು, ಈ ಮರಿಯನ್ನು ಬಿಟ್ಟುಬಿಡು, ನಿನಗೆ ಬೇರೆ ಆಟದ ಸಾಮಾನನ್ನು ಕೊಡುತ್ತೇವೆ.

ಬಾಲಕ– ಎಲ್ಲಿ ಕೊಡು ಮತ್ತೆ. (ಎಂದು ಕೈ ಚಾಚುವನು.)

ಆಗ ದುಷ್ಯಂತನು ಆ ಬಾಲಕನ ಹಸ್ತದಲ್ಲಿರುವ ಚಕ್ರವರ್ತಿ ಲಕ್ಷಣಗಳನ್ನು ನೋಡಿ ವಿಸ್ಮಿತನಾದನು. ತಾಪಸಿಯು ಇನ್ನೊಬ್ಬಳನ್ನು ಕುರಿತು, “ಸುವ್ರತೆ, ಮಂಕಣ ಮುನಿಯ ಮಗನ ಬಳಿ ಮಣ್ಣಿನ ನವಿಲಿದೆ. ಬೇಗ ಹೋಗಿ ಅದನ್ನು ತೆಗೆದುಕೊಂಡು ಬಾ?’ ಎಂದು ಅವಳನ್ನು ಕಳುಹಿಸಿದಳು. ಬಾಲಕನು “ನಾನು ಈ ಮರಿಯೊಡನೆಯೇ ಆಟವಾಡುತ್ತೇನೆ? ಎಂದು ಕಿಲಕಿಲನೆ ನಗುತ್ತ ಹೇಳಿದುದನ್ನು ಕೇಳಿದ ದುಷ್ಯಂತನು ಅವನ ಗಾಂಭೀರ್ಯವನ್ನೂ ಮುದ್ದು ಮಾತುಗಳನ್ನೂ ಮನಸ್ಸಿಗೆ ತಂದುಕೊಂಡು, “ಮಕ್ಕಳ ಮೈದೂಳಿನಿಂದ ಮಲಿನವಾದ ತೊಡೆಗಳುಳ್ಳ ತಂದೆಯರು ಅದೇನು ಧನ್ಯರೋ” ಎಂದುಕೊಂಡನು.

ಆ ಸಮಯದಲ್ಲಿ ಬಾಲಕನನ್ನು ಹೇಗಾದರೂ ಮಾಡಿ ತಡೆದು, ಆ ಸಿಂಹದಮರಿಯನ್ನು ಬಿಡಿಸಬೇಕೆಂದು ತಾಪಸಿಯರು ಸಮಾಪದಲ್ಲಿಯೇ ಆಶ್ರಮದವರಾರಾದರೂ ಇರಬಹುದೆಂದು ನೋಡಿ ದುಷ್ಯಂತನಿರುವುದನ್ನು ಕಂಡು, “ಭದ್ರಮುಖ, ಈ ಬಾಲಕನು ಈ ಮರಿಯನ್ನು ಬಹಳವಾಗಿ ಸೀಡಿಸುತ್ತಿರುವನು. ಸ್ವಲ್ಪ ಬಿಡಿಸು” ಎಂದು ಪ್ರಾರ್ಥಿಸಿದರು. ದುಷ್ಯಂತನು ಅವನ ಬಳಿಗೆ ಹೋಗಿ, “ಮಗು, ಖುಷಿಕುಮಾರನಾಗಿ ಆಶ್ರಮವಿರುದ್ಧಗಳಾದ ಕಾರ್ಯಗಳನ್ನು ಮಾಡಬಹುದೆ? ಬೇಡ” ಎಂದನು. ತಾಪಸಿಯು ಅವನ ಮಾತನ್ನು ಕೇಳಿ, “ಇವನು ಖುಷಿಕುಮಾರನಲ್ಲ” ಎಂದಳು.

ಬಾಲಕನ ಆಕೃತಿ, ಅವನು ಮಾಡುತ್ತಿದ್ದ ಧೀರೋದಾತ್ತ ಕಾರ್ಯ- ಇವೇ ಅವನು ಖುಷಿಕುಮಾರನಲ್ಲವೆಂಬುದನ್ನು ಸೂಚಿಸಿದ್ದುವು. ದುಷ್ಯಂತನಿಗೂ ಇದು ತಿಳದಿದ್ದಿತು. ಆದರೂ ವಿಷಯವನ್ನು ತಿಳಿಯಲು ಅವನು ಹಾಗೆಂದಿದ್ದನು. ಅವನು ಬಾಲಕನನ್ನು ಸ್ಪರ್ಶಿಸಿ, ಕುಲಾಂಕುರ ಪ್ರಾಯನಾದ ಕುಮಾರನನ್ನು ಸ್ಪರ್ಶಿಸಿದಷ್ಟು ಆನಂದವು ತನ್ನಲ್ಲಿ ಉಂಟಾದುದನ್ನು ಕಂಡು ಆಶ್ಚರ್ಯಭರಿತನಾದನು. ಸುತಸ್ಪರ್ಶದಿಂದ ತಂದೆಯರಿಗೆ ಆನಂದವಾಗುವುದು ಅತಿಶಯವೆ?

ತಾಪಸಿಯರು ಆ ಬಾಲಕನ ಮತ್ತು ದೊರೆಯ ಆಕೃತಿಗಳಲ್ಲಿ ಹೋಲಿಕೆಯಿರುವುದನ್ನು ಕಂಡು ತಮ್ಮಲ್ಲಿಯೇ ಆಶ್ಚರ್ಯಪಡುತ್ತಿದ್ದರು. ಬಾಲಕನು ಕ್ಷತ್ರಿಯ ಕುಮಾರನೆಂದು ಸ್ಪಷ್ಟವಾದಮೇಲೆ ದುಷ್ಯಂತನು ಅವನು ಯಾರ ಮಗನೆಂದು ತಿಳಿದುಕೂಳ್ಳಲು ತಾಪಸಿಯನ್ನು ಪ್ರಶ್ನಿಸಿದನು.

ತಾಪಸಿ– ಆರ್ಯ, ಈ ಬಾಲಕನು ಪುರುವಂಶದವನು.

ಅರಸ– (ಸ್ವಗತ) ನಮ್ಮಿಬ್ಬರ ವಂಶವೂ ಒಂದೇ ಆಗಿದೆಯೆ! ಆದುದರಿಂದಲೇ ಈ ಪೂಜ್ಯೇಯು ಇವನು ನನ್ನನ್ನು ಹೋಲುತ್ತಿರುವನೆಂದು ತಿಳಿದಿರುವಳು. ಇದು ಅಸಂಭವವೂ ಅಲ್ಲ. ಪುರುವಂಶದವರು ವಾನಪ್ರಸ್ಥಾಶ್ರಮಿಗಳಾಗಿ ತಪೋವನಗಳಲ್ಲಿರುವುದುಂಟು, (ಪ್ರಕಾಶ) ಇದು ಮನುಷ್ಯರಿರುವ ದೇಶವಲ್ಲವಷ್ಟೆ.

ತಾಪಸಿ.-ಅದು ನಿಜ. ಅಪ್ಸರಸಂಬಂಧದಿಂದ ಈ ಬಾಲಕನ ತಾಯಿಯು ಇವನನ್ನು ಇಲ್ಲಿ ಪ್ರಸವಿಸಿದಳು.

ಅರಸ– (ಸ್ವಗತ) ಈ ಮಾತು ಮತ್ತೊಮ್ಮೆ ಆಸೆಯನ್ನು ಹುಟ್ಟಸುತ್ತಿರುವುದು. (ಪ್ರಕಾಶ) ಇವನ ತಾಯಿಯು ಯಾವ ರಾಜರ್ಷಿಯ ಪತ್ನಿ?

ತಾಪಸಿ– ಧರ್ಮಪತ್ನಿಯ ಹೆಸರನ್ನು, ತೊರೆದವರ ಹೆಸರನ್ನು ಯಾರುತಾನೆ ಹೇಳಿಯಾರು?

ಅರಸ– (ಸ್ಪಗತ) ಈ ಮಾತು ನನ್ನನ್ನೇ ಕುರಿತಂತೆ ಇದೆ. ಈ ಬಾಲಕನ ತಾಯ ಹೆಸರನ್ನು ಕೇಳಲೆ? ಅಥವಾ ಪರಪತ್ನಿಯ ವಿಚಾರವನ್ನು ಕೇಳುವುದು ನ್ಯಾಯವಲ್ಲ.

ಅರಸನು ಹೀಗೆಂದುಕೊಳ್ಳುತ್ತಿರುವಲ್ಲಿ ಸುವ್ರತೆಯೆಂಬ ತಾಪಸಿ, ಬಣ್ಣದ ನವಿಲನ್ನು ತಂದು ಬಾಲಕನಿಗೆ ತೋರಿಸಿ, ಸರ್ವದಮನ, ಶಾಕುಂತಲಾವಣ್ಯವನ್ನು ನೋಡು” ಎಂದಳು. ಬಾಲಕನು ನಾಮ ಸಾದೃಶ್ಯವಿದ್ದುದರಿಂದ ತನ್ನ ತಾಯಿ ಎಂದೇ ಭ್ರಮಿಸಿ, “ಅಮ್ಮ ಎಲ್ಲಿ” ಎಂದನು. ಅರಸನು ಇದನ್ನು ಕೇಳಿ ದಿಗ್ಭ್ರಾಂತನಾದನು. ಆದರೂ ಆ ಹೆಸರಿನವರು ಎಷ್ಟೋಮಂದಿ ಇರಬಹುದೆಂದು ಸುಮ್ಮನಾದನು.

Leave a Reply

Your email address will not be published. Required fields are marked *