ಚಂದಮಾಮ – ಕನ್ನಡ ಪದ್ಯ

ಚಂದಮಾಮ

ಚಂದಮಾಮ ಬಾರಯ್ಯ
ನಮ್ಮ ಮನೆಗೆ ಬಾರಯ್ಯ
ಹಾಲು ಸಕ್ಕರೆ ಕೂಡಿಸಿ ಕೊಡುವೆ
ಕುಡಿಯಲು ಬೆಳ್ಳಿಯ ಬಟ್ಟಲು ಕೊಡುವೆ || ಚಂದಮಾಮ ||

ಸಕ್ಕರೆ ಕಡ್ಡಿ ತರ್ತೀನಿ
ಮಿಕ್ಕರೆ ನಿನಗೂ ಕೊಡ್ತೀನಿ
ಇಬ್ಬರು ಸೇರಿ ತಿನ್ನೋಣ
ಇಬ್ಬರು ಕೂಡಿ ಆಡೋಣ || ಚಂದಮಾಮ ||

ಎಲ್ಲಿಗೋದ್ರು ಬರ್ತೀಯ
ಅಲ್ಲೇ ದೂರದಲ್ಲಿರ್ತೀಯ
ಹಿಂದೆ ಹಿಂದೆ ಬರ್ತೀಯ
ಎಲ್ಲಂದ್ರಲ್ಲೇ ನಿಲ್ತೀಯ || ಚಂದಮಾಮ ||


Leave a Reply

Your email address will not be published. Required fields are marked *