ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ- ಕೆ. ಎಸ್. ನರಸಿಂಹಸ್ವಾಮಿ ಯವರ ಕವನ

ಹಕ್ಕಿಯ ಹಾಡಿಗೆ ತಲೆದೂಗುವ ಹೂ
ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು
ನಾನಾಗುವ ಆಸೆ
ಹಬ್ಬಿದ ಕಾಮನ ಬಿಲ್ಲಿನ ಮೇಲಿನ
ಮುಗಿಲಾಗುವ ಆಸೆ
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ
ಮಿಂಚಾಗುವ ಆಸೆ
ತೋಟದ ಕಂಪಿನ ಉಸಿರಲಿ ತೇಲುವ
ಜೇನಾಗುವ ಆಸೆ
ಕಡಲಿನ ನೀಲಿಯ ನೀರಲಿ ಬಳುಕುವ
ಮೀನಾಗುವ ಆಸೆ
ಸಿಡಿಲನು ಕಾರುವ ಬಿರುಮಳೆಗಂಜದೆ
ಮುನ್ನಡೆಯುವ ಆಸೆ
ನಾಳೆಯ ಬದುಕಿನ ಇರುಳಿನ ತಿರುವಿಗೆ
ದೀಪವನಿಡುವಾಸೆ