ಮಂಗನ ನ್ಯಾಯ – ಪದ್ಯ

ಜೋಡಿಬೆಕ್ಕು ಕೂಡಿಕೊಂಡು
ಬೆಣ್ಣೆ ಗಡಿಗೆ ತಂದವು
ನನಗೆ ಹೆಚ್ಚು ತನಗೆ ಹೆಚ್ಚು
ಎನುತ ಜಗಳ ಕಾದವು
ಹೊಂಚು ಹಾಕಿ ಕುಟಿಲ ಮಂಗ
ನ್ಯಾಯ ಹೇಳ ಬಂದಿತು
ತೂಕ ಮಾಡಿ ಕೊಡುವೆ ನಾನು
ಪರಡಿ ತನ್ನಿ ಎಂದಿತು
ಆಚೆ ಈಚೆ ಬೆಣ್ಣೆ ಹಚ್ಚಿ
ಪರಡಿ ತೂಗಿ ನೋಡಿತು
ಅದಕೆ ಹೆಚ್ಚು ಇದಕೆ ಹೆಚ್ಚು
ಎನುತ ಗುಳುಂ ನುಂಗಿತು
ಹಾಗು ಹೀಗು ಮಾಡಿ ಮಂಗ
ತಾನೇ ತಿಂದು ತೇಗಿತು
ಗಡಿಗೆ ಒಡೆದು ಪರಡಿ ಚೆಲ್ಲಿ
ಗಿಡದ ಮೇಲೆ ಹಾರಿತು
ನಮ್ಮ ಜಗಳದಿಂದ ಬೆಣ್ಣೆ
ಪರರ ಸೊತ್ತು ಆಯಿತು
ಜೋಡಿ ಬೆಕ್ಕು ಜಗಳ ಸಲ್ಲ
ಎನುತ ಮರಳಿ ನಡೆದವು