ನವರತ್ನಗಳು

ನವರತ್ನಗಳು ಅಮೂಲ್ಯ ವಸ್ತುಗಳು. ಪ್ರತಿಯೊಬ್ಬರ ಮನಸ್ಸನ್ನೂ ಆಕರ್ಷಿಸುವ ಶಕ್ತಿ ಅವುಗಳಲ್ಲಿದೆ. ನಮ್ಮ ಭರತಖಂಡದ ಜನಗಳಿಗೆ ನವರತ್ನಗಳು ಯುಗಾಂತರ ಗಳಿಂದಲೂ ಪರಿಚಯದಲ್ಲಿವೆ. ರಾಮಾಯಣ, ಮಹಾಭಾರತ ಗ್ರಂಥಗಳಲ್ಲಿಯೂ, ಪುರಾಣಗಳಲ್ಲಿಯೂ ನವರತ್ನಗಳನ್ನು ಆಗಿಂದಾಗ್ಗೆ ವರ್ಣಿಸಿರುತ್ತಾರೆ. ಶಮಂತಕಮಣಿಯ ನಿಷಯವನ್ನು ಕೇಳದೆ, ಓದದೆ, ಇರುವವರು ಅತಿ ವಿರಳ.
ಈ ನವರತ್ನಗಳು ಯಾವುವು, ಹೇಗೆ ಉತ್ಪತ್ತಿಯಾಗಿವೆ, ಎಲ್ಲಿ ದೊರಕುತ್ತವೆ, ಆಭರಣಗಳಿಗಲ್ಲದೆ, ಅವುಗಳು ಬೇರೆ ಯಾವುದಕ್ಕಾದರೂ ಉಪಯೋಗ ವಾಗುತ್ತವೆಯೇ ಎಂಬ ವಿಷಯಗಳನ್ನು ನಾವು ತಿಳಿದುಕೊಳ್ಳಬೇಕು. ಸಾಧಾರಣವಾಗಿ ವಾಡಿಕೆಯಲ್ಲಿರುವ ನನರತ್ನಗಳು ಯಾವುವೆಂದರೆ:
- ವಜ್ರ (Diamond)
- ವೈಡೂರ್ಯ (Amethyst / Turquoise )
- ಪಚ್ಛೆ, ಅಥವಾ ಮರಕತ (Emerald)
- ಪುಷ್ಯರಾಗ (Topaz white or yellow)
- ಮುತ್ತು (Pearl)
- ನೀಲ (Sapphire)
- ಕೆಂಪು ಅಥವಾ ಮಾಣಿಕ್ಯ (Ruby)
- ಗೋಮೇಧಿಕ (Zircon / Onyx )
- ಹವಳ ಅಥವಾ ಪ್ರವಾಳ (Coral)
ನವರತ್ನಗಳು ದೊರಕುವುದು ವಿರಳ. ಹೇರಳವಾಗಿ ದೊರಕಿದ್ದರೆ ಅವು ಅಮೂಲ್ಯ ರತ್ನಗಳಾಗಿ ಪರಿಗಣಿಸಲ್ಪಡದೆ ಇರಬಹುದಾಗಿತ್ತು. ನವರತ್ನಗಳಲ್ಲಿ ವಜ್ರ, ಕೆಂಪು, ನೀಲ, ಪಚ್ಚೆ, ಮುತ್ತು– ಈ ಐದು ರತ್ನಗಳನ್ನು ಉತ್ತಮ ದರ್ಜೆಯಲ್ಲಿ ಸೇರಿಸಿ, ಉಳಿದವುಗಳನ್ನು ಮಧ್ಯಮ ದರ್ಜೆಗೆ ಎಳೆದಿದ್ದಾರೆ. ಉತ್ತಮ ದರ್ಜೆಯ ರತ್ನಗಳನ್ನು ಆಂಗ್ಲೇಯ ಭಾಷೆಯಲ್ಲಿ Precious stones (ಅಮೂಲ್ಯ ಕಲ್ಲುಗಳು) ನಂದೂ, ಮಧ್ಯಮ ದರ್ಜೆಯ ರತ್ನಗಳನ್ನು Semi-precious stones (ಅರೆವಾಸಿ ಅಮೂಲ್ಯ ಕಲ್ಲುಗಳು) ಎಂದೂ ಕರೆಯು ತ್ತಾರೆ… ಈ ತರದ ವಿಂಗಡನೆಯು, ಆಯಾಯ ರತ್ನದ ಗುಣಲಕ್ಬಣಗಳನ್ನೂ, ಸ್ಥಿರತ್ವವನ್ನೂ, ಪುಷ್ಪಳತೆಯನ್ನೂ ಅವಲಂಬಿಸಿರುತ್ತದೆ. ಮಧ್ಯಮ ದರ್ಜೆಯ ರತ್ನಗಳು ಉತ್ತಮ ದರ್ಜೆಯ ರತ್ನಗಳಿಗಿಂತ ಹೆಚ್ಚಾಗಿ ದೊರಕುತ್ತವೆ. ಹೊಳಪು. ಕಾಠಿಣ್ಯ ಮತ್ತು ಸ್ಲಿರತ್ವ ಈ ಗುಣಗಳಲ್ಲಿ ಅವು ಉತ್ತಮ ದರ್ಜೆಯ ರತ್ನಗಳ ಸಮಕ್ಕೆ ಬರಲಾರವು. ಉತ್ತಮ ದರ್ಜೆಗೆ ಸೇರಿದ ರತ್ನಗಳಲ್ಲಿ ನಾಲ್ಕು ಭೂಗರ್ಭದಲ್ಲಿ ದೊರಕುವ ಕಲ್ಲುಗಳು. ಮುತ್ತು ಮಾತ್ರ ಸಮುದ್ರದೊಳಗೆ ಜೀವಿಸುವ ಪ್ರಾಣಿಗಳಿಂದ ಉತ್ಪತ್ತಿಯಾದ, ಲೋಹಗಳಿಗೆ ಸಂಬಂಧ ಪಟ್ಟ ನಿರ್ಜೀವ ವಸ್ತುವು. ಸುಣ್ಣಕಲ್ಲಿನಲ್ಲಿರುವ ವಸ್ತುವೇ ಮುತ್ತಿನಲ್ಲೂ ಬಹು ಮಟ್ಟಿಗೆ ಇದೆ.
ನವರತ್ನಗಳು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನವ ಗ್ರಹಗಳನ್ನು ಪ್ರತಿನಿಧಿಸುವ 9 ರತ್ನಗಳು. ನೂರಾರು ರತ್ನಗಳು ಇದ್ದರೂ ಮಾನವ ಭೌತಿಕ ಗುಣಗಳನ್ನು ಬದಲಿಸುವ ಹಾಗೂ ಅವಿನಾಭಾಜ್ಯ ಸಂಬಂಧಗಳಿರುವ 9 ರತ್ನಗಳನ್ನು ಮಾತ್ರ ಗುರುತಿಸಿದ್ದಾರೆ. ಇವುಗಳನ್ನು ತನ್ನ ಗುಣಸ್ವರೂಪ ಮತ್ತು ಬಣ್ಣಗಳ ಲಾಸ್ಯದಿಂದ ಮಾತ್ರ ಗುರುತಿಸಲಾಗಿದೆ. ಪ್ರತಿಯೊಂದು ರತ್ನವೂ ತನ್ನದೇ ಆದ ಗುಣರೂಪ, ಪರಿಭೇದಗಳಿಂದ ಮತ್ತು ಲಾಸ್ಯಗಳಿಂದ ಕೂಡಿದೆ. ನಿರ್ದಿಷ್ಟ ಗ್ರಹ ಒಂದಕ್ಕೆ ಪ್ರಿಯಕರ ರತ್ನವಾಗಿರುತ್ತದೆ. ಕೆಂಪು ಲಾಸ್ಯವನ್ನು ಹೊಂದಿರುವ ಮಾಣಿಕ್ಯವು ಸೂರ್ಯನಿಗೂ, ಮುತ್ತು, ಹವಳ (ಕೊರಲ್) ಕುಜನಿಗೂ, ಮರಗತ (ಪಚ್ಚೆ) ಬುಧನಿಗೂ, ಪುಷ್ಟರಾಗ ಗುರುವಿಗೂ, ಬಿಳಿಯ ವಜ್ರ ಶುಕ್ರನಿಗೂ, ನೀಲ ಶನಿಗೂ, ಗೋಮೇದ ರಾಹು, ವೈಡೂರ್ಯ ಕೇತುಗ್ರಹಗಳು ಪ್ರಿಯಕರ ಗ್ರಹಗಳಾಗಿರುತ್ತವೆ. ಪ್ರತಿಯೊಂದು ಗ್ರಹಕ್ಕೂ ಲಾಂಚನಗಳಿದ್ದು ವಾಸ್ತು ಸೂತ್ರಗಳಿಂದ ನವರತ್ನಗಳನ್ನು ಪೋಣಿಸಿರುವುದೇ ಒಂದು ವೈಶಿಷ್ಟ್ಯವಾಗಿದೆ.
1 . ವಜ್ರ ( Diamond )

ಚಿತ್ರಕೃಪೆ
ನವರತ್ನಗಳಲ್ಲಿ ಅತಿ ಶ್ರೇಷ್ಠವಾದುದು ವಜ್ರ. ವಜ್ರವು ಲೋಕದಲ್ಲಿರುವ ಪದಾರ್ಥಗಳಲ್ಲೆಲ್ಲಾ ಅತಿ ಕಠಿಣವಾದ ವಸ್ತುವು. ಉಕ್ಕು ಮತ್ತು ಇತರ ಲೋಹ ಗಳಾವುವೂ ವಜ್ರದಷ್ಟು ಕಾಠಿಣ್ಯವನ್ನು ಪಡೆದಿಲ್ಲ. ಉಕ್ಕನ್ನು ವಜ್ರವು ಪುಡಿಮಾಡಬಲ್ಲದು. ವಜ್ರವನ್ನು ಕತ್ತರಿಸಬೇಕಾದರೆ ವಜ್ರದ ಉಳಿಯೇ ಆಗಬೇಕು; ಆದುದರಿಂದಲೇ “Diamond cuts diamond’ (ವಜ್ರವು ವಜ್ರವನ್ನು ಕತ್ತರಿಸುತ್ತದೆ) ಎಂಬ ಹೇಳಿಕೆ ಹುಟ್ಟಿದೆ.
ವಜ್ರವೂ ಇದ್ದಲೂ ಇಂಗಾಲನೆಂಬ ಮೂಲವಸ್ತುವಿನ ಬೇರೆ ಬೇರೆ ರೂಪಗಳು; ಎಂದರೆ ವಜ್ರ ದಲ್ಲಿರುವ ಮೂಲವಸ್ತುವೂ ಇದ್ದಲಿನಲ್ಲಿರುವ ಮೂಲ ವಸ್ತುವೂ ಒಂದೇ. ವಜ್ರವು ಪಟಕಾಕೃತಿಯಲ್ಲಿ ಎಂದರೆ ಹರಳುಗಳಾಗಿ ಸಿಗುತ್ತದೆ.
ಕ್ರಿ.ಶ.1728ರವರೆಗೆ ವಜ್ರಗಳಿಗೆ ಭರತಖಂಡ ಮಾತ್ರವೇ ತವರುಮನೆಯಾಗಿತ್ತು. ಪರದೇಶಗಳಿಗೆ, ವಜ್ರವು ನಮ್ಮ ಭರತಖಂಡದಿಂದಲೇ ಹೋಗಬೇಕಾಗಿತ್ತು. 1725ರಿಂದೀಚೆಗೆ ದಕ್ಷಿಣ ಅಮೆರಿಕಾದಲ್ಲೂ, 1870ರಿಂದೀಚೆಗೆ ದಕ್ಷಿಣ ಆಫ್ಸಿಕಾದಲ್ಲೂ ವಜ್ರದ ಗಣಿಗಳು ಸಿಕ್ಕಿದುದರಿಂದ ನಮ್ಮ ಭರತಖಂಡಕ್ಕೆ ಪ್ರಾಶಸ್ತ್ಯ ಕಡಿಮೆಯಾಯಿತು.
2. ವೈಡೂರ್ಯ ( Turquoise )

ಚಿತ್ರಕೃಪೆ
ಬೆಣಚುಕಲ್ಲಿನಲ್ಲಿರುವ ವಸ್ತುವೇ ವೈಡೂರ್ಯದಲ್ಲಿಯೂ ಇದೆ. ಇದನ್ನು ಸಿಲಿಕಾನ್ ದ್ವಯಾಕ್ಸೈಡ್ ಅಥವಾ ಸಿಲಿಕ ಎಂದು ಕರೆಯುತ್ತಾರೆ. ಪಾಟಲವರ್ಣ ಅಥವಾ ನೇರಲೆ ಬಣ್ಣವನ್ನು ಹೊಂದಿರುತ್ತದೆ. ಕಾಠಿಣ್ಯ 7. ಈ ರತ್ತವು ಮುಖ್ಯವಾಗಿ ಬ್ರೆನಿಲ್ ದೇಶದಲ್ಲಿ ಹೆಚ್ಚಾಗಿ ಸಿಗುತ್ತದೆ. ಸಂಯುಕ್ತ ಅಮೆರಿಕಾದಲ್ಲಿಯೂ, ಮೆಕ್ಸಿಕೋ, ಸಿಲೋನ್, ಬರ್ಮಾ ಮುಂತಾದ ದೇಶಗಳಲ್ಲಿಯೂ ಸ್ವಲ್ಪ ಮಟ್ಟಿಗೆ ಸಿಗುತ್ತದೆ.
ವೈಡೂರ್ಯಗಳನ್ನು ಧರಿಸುತ್ತಿದ್ದರೆ ಗಂಡಹೆಂಡರಿಗೆ ಪ್ರೀತಿ ವಿಶ್ವಾಸಗಳು ಚೆನ್ನಾಗಿರುತ್ತವೆಎಂದು ರೋಮನ್ ಸ್ತ್ರೀಯರು ತಿಳಿದುಕೊಂಡಿದ್ದರು.
3. ಮರಕತ / ಪಚ್ಛೆ ( Emerald )

ಚಿತ್ರಕೃಪೆ
ಪಚ್ಚೆ ರತ್ನದಲ್ಲಿರುವ ಸಂಯುಕ್ತವಸ್ತುವನ್ನು ರಸಾಯನ ವೈಜ್ಞಾನಿಕರು ಅಲ್ಯೂಮಿನಿಯಂ ಮತ್ತು ಬೆರಲಿಯಂ ಸಿಲಿಕೇಟ್ ಎಂದು ಕರೆಯುತ್ತಾರೆ. ಈ ಹರಳಿನ ಕಾಠಿಣ್ಯ 7-1/2ಯಿಂದ 8ರವರೆಗೆ ಇರುತ್ತದೆ. ಕೊಲಂಬಿಯಾ (ದಕ್ಷಿಣ ಅಮೆರಿಕಾ), ಈಜಿಪ್ಟ್, ಯೂರಲ್ ಪರ್ವತ ಮತ್ತು ಆಸ್ಟ್ರೇಲಿಯಾ-ಈ ಸ್ಥಳಗಳಲ್ಲಿ ಪಚ್ಚೆಗಳು ಸಿಗುತ್ತವೆ.
4. ಪುಷ್ಯರಾಗ ( Topaz )

ಚಿತ್ರಕೃಪೆ
ಪುಷ್ಯರಾಗದಲ್ಲಿರುವ ಸಂಯುಕ್ತ ವಸ್ತುವು ಅಲ್ಯೂಮಿನಿಯಮ್ಮಿನ ಫೋರೋಸಿಲಿಕೇಟ್. ಈ ಹರಳಿನ ಕಾಠಿಣ್ಯ 8. ಹಲವು ಬಣ್ಣದ ಪುಷ್ಯರಾಗಗಳು ಸಿಗುತ್ತವೆ. ಅವುಗಳಲ್ಲಿ ಮುಖ್ಯವಾದವು ಎರಡು: ಬಿಳಿಯದು ಮತ್ತು ಹಳದಿ ಬಣ್ಣದ್ದು. ನಮ್ಮ ದೇಶದಲ್ಲಿ ಬಿಳಿಯ ಪುಷ್ಕರಾಗಗಳನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ವಜ್ರಗಳನ್ನು ಕಡಿಯುವ ಮಾದರಿಯಲ್ಲಿಯೇ ಪುಷ್ಕರಾಗಗಳನ್ನೂ ಕಡಿಯುತ್ತಾರೆ. ಪುಷ್ಯರಾಗಗಳು ಬ್ರೆಸಿಲ್ ದೇಶದಲ್ಲಿ ಹೆಚ್ಚಾಗಿ ಸಿಗುತ್ತವೆ. ಯೂರಲ್ ಪರ್ವತ, ಜಪಾನ್, ಸಿಲೋನ್ ಮುಂತಾದ ಸ್ಥಳಗಳಲ್ಲಿಯೂ ಪುಷ್ಯರಾಗವು ಸಿಗುತ್ತದೆ. ಬಿಳಿಯ ಪುಷ್ಯರಾಗ ಗಳು ಸ್ವಾಟ್ಲೆಂಡ್, ಐರ್ಲೆಂಡ್, ಜಪಾನ್ ದೇಶಗಳಲ್ಲಿ ಸಿಗುತ್ತವೆ. “ಬ್ರಗಾನ್ ಟ್ಟಿ” ಎಂಬುದು ಒಂದು ಹೆಸರುವಾಸಿ ಯಾದ ಪುಷ್ಯರಾಗ; ತೂಕ 1680 ಕ್ಯಾರಟ್. ಇದು ಪೋರ್ಚುಗೀಸ್ ದೇಶದ ಹಿಂದಿನ ರಾಜರ ಕಿರೀಟದಲ್ಲಿದೆ.
5. ಮುತ್ತು ( Pearl )

ಚಿತ್ರಕೃಪೆ
ಅನಾದಿ ಕಾಲದಿಂದಲೂ ಮುತ್ತನ್ನು ಆಭರಣಗಳಲ್ಲಿ ಉಪಯೋಗಿಸುತ್ತಿದ್ದಾರೆ. ನಮ್ಮ ಪೂರ್ವಿಕರು ಬಟ್ಟೆ ಬರೆಗಳನ್ನು ಹವಣಿಸಿಕೊಂಡು ಗುಢಿಸಲುಗಳಲ್ಲಿ ವಾಸಿಸುವುದನ್ನು ಕಲಿಯುವುದಕ್ಕೆ ಮುಂಚೆಯೇ ಮುತ್ತುಗಳನ್ನು ಕಂಡು ಹಿಡಿದಿದ್ದರು. ಸಮುದ್ರದಲ್ಲಿ, ಕೆಲವು ವೇಳೆ ನದಿಗಳಲ್ಲಿ, ಜೀವಿಸುವ ಕೆಲವು ಸಣ್ಣ ಪ್ರಾಣಿಗಳಿಂದ ಮುತ್ತು ಉತ್ಪತ್ತಿಯಾಗುತ್ತದೆ. ಮುತ್ತನ್ನು ಉತ್ಪತ್ತಿಮಾಡುವ ಪ್ರಾಣಿಗಳಿಗೆ ಆಂಗ್ಲೇಯ ಭಾಷೆಯಲ್ಲಿ “ಒಯ್ಸ್ಟರ್ ‘ (Oyster) ಎನ್ನುತ್ತಾರೆ. ಪ್ರಾಣಿವಿಜ್ಞಾನಕ್ಕನುಸಾರವಾಗಿ
ಈ ಪ್ರಾಣಿಗಳು ಮೃದ್ವಂಗಿ (Mollusks) ಎಂಬ ಗುಂಪಿಗೆ ಸೇರಿವೆ.
6. ನೀಲ ( Sapphire )

ಚಿತ್ರಕೃಪೆ
ಕಂಪು ಮತ್ತು ನೀಲ, ಈ ಎರಡು ರತ್ನಗಳೂ ಕುರಂಗ ಅಥವಾ ಕುರಂದ ಎಂಬ ಖನಿಜದಿಂದ ಉತ್ಪತ್ತಿಯಾಗಿವೆ. ಈ ಖನಿಜವನ್ನು ಆಂಗ್ಲೇಯ ಭಾಷೆಯಲ್ಲಿ Corundum ಎಂದು ಕರೆಯುತ್ತಾರೆ. ಆಂಗ್ಲೇಯ ಭಾಷೆಯ ಕೊರಂಡಂ ಎಂಬ ಶಬ್ದವೂ, ಕನ್ನಡ ಭಾಷೆಯ ಕುರಂಗ (ಕುರಂದ) ಎಂಬ ಶಬ್ದವೂ, ಸಂಸ್ಕೃತದ ಕುರವಿಂದ ಎಂಬ ಶಬ್ದ ದಿಂದ ಉತ್ಪತ್ತಿಯಾಗಿರಬೇಕೆಂದು ಊಹಿಸಿದ್ದಾರೆ.
ಬಣ್ಣ ವ್ಯತ್ಯಾಸಗಳನ್ನು ಹೊಂದಿ, ಬೇರೆಬೇರೆ ವಸ್ತು ಗಳಂತೆ ತೋರ್ಪಡಿಸಿಕೊಳ್ಳುತ್ತಿರುವ ಈ ಎರಡು ರತ್ನಗಳು, ಒಂದೇ ಸಂಯುಕ್ತವಸ್ತುವಿರಿಂದ ಉತ್ಪತ್ತಿಯಾಗಿದೆ ಎಂಬ ವಿಷಯವು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡದಿರಲಾರದು. ಕೊರಂಡಂದಲ್ಲಿರುವೆ ಸಂಯುಕ್ತವಸ್ತುವನ್ನು “ಅಲ್ಯೂಮಿನಿಯಂ ಆಕ್ಸೈಡ್? ಎಂದು ಕರೆಯುತ್ತಾರೆ. ಅಲ್ಯೂಮಿನಿಯಂ ಲೋಹವು ಗಾಳಿಯಲ್ಲಿರುವ ಆಮ್ಲಜನಕ ದೊಂದಿಗೆ ಸಂಯೋಗವಾದರೆ ಅಲ್ಯೂಮಿನಿಯಂ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ಇದನ್ನು ನಾವು ಅಲ್ಯೂಮಿನಿಯಂ ಭಸ್ಮವೆಂದೂ ಕರೆಯಬಹುದು. ಇತರ ಭಸ್ಮಗಳಂತೆ ಇದು ಪುಡಿಯಾಗಿರಬಲ್ಲದು. ಆದರೆ ಭೂಮಿಯಲ್ಲಿ ಸಿಗುವ
ಕುರಂಗವು ಪಟಕಾಕೃತಿಯಲ್ಲಿರುತ್ತದೆ. ಕುರಂಗದ ಹರಳು ಗಳು ಕೆಲವುಸಲ ಶುಭ್ರವಾಗಿ ಬೆಳ್ಳಗಿರುತ್ತವೆ. ವಿಧವಿಧ ವಾದ ಬಣ್ಣಗಳನ್ನು ಹೊಂದಿರುವುದೂ ಉಂಟು.
7. ಮಾಣಿಕ್ಯ / ಕೆಂಪು ( Ruby )

ಚಿತ್ರಕೃಪೆ
8. ಗೋಮೇಧಿಕ ( Onyx )

ಚಿತ್ರಕೃಪೆ
ಗೋಮೇಧಿಕ ರತ್ನವು “ಸಿರ್ಕ್ಯಾನ್ ಸಿಲಿಕೇಟ್’ ಎಂಬ ಸಂಯುಕ್ತವಸ್ತುವಿನಿಂದ ಉತ್ಪತ್ತಿಯಾಗಿದೆ. ಕಾಠಿಣ್ಯ 5: ಇದು ವಿಧವಿಧವಾದ ಬಣ್ಣ ಗಳಲ್ಲಿ ದೊರಕುತ್ತದೆ. ಗೋಮೇಧಿಕಗಳು ಸಿಲೋನ್, ರಷ್ಯಾ, ಸ್ಪಾನ್ಸ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಸಿಗುತ್ತವೆ. ಸಿಂಹಳದ್ದೀಸದ ಹರಳುಗಳೇ ಅತಿ ಶೆ ಶ್ರೇಷ್ಠವಾದವುಗಳು. ಹಳದಿ, ಊದ, ಹಸುರು, ಕೆಂಪು ಮುಂತಾದ ಬಣ್ಣಗಳಲ್ಲಿ ಗೋಮೇಧಿಕವು ಸಿಗುತ್ತದೆ. ಇವುಗಳನ್ನು ಆಭರಣಗಳಲ್ಲಿ ಉಪಯೋಗಿಸುತ್ತಾರೆ. ಬಣ್ಣದ ಗೋಮೇಧಿಕವನ್ನು ಸ್ವಲ್ಪ ಹೊತ್ತು ಕಾಸಿದರೆ, ವರ್ಣರಹಿತವಾಗುತ್ತದೆ. ಇಂತಹ ಬಿಳಿಯ ಗೋಮೇಧಿಕಗಳು ಹೊಳಸಿ ನಲ್ಲಿ ವಜ್ರಕ್ಕೆ ಸರಿಸಮಾನವಾಗಿರುತ್ತವೆ. ಸಿಂಹಳದ್ವೀಪದ “ಮಾತುರ’ ಪ್ರದೇಶದಲ್ಲಿ ಸಿಗುವ ಬಣ್ಣದ ಗೋಮೇಧಿಕದಿಂದ ಬಿಳಿಯ ಗೋಮೇಧಿಕಗಳನ್ನು ತಯಾರುಮಾಡುತ್ತಾರೆ. ಇವು ಗಳನ್ನು “ಮಾತುರಾ” ವಜ್ರಗಳೆಂದು ಕರೆಯುವುದುಂಟು.
9. ಹವಳ
ಮುತ್ತು, ಹವಳ ಈ ಎರಡು ರತ್ನಗಳಾದರೋ ಜೀವದಿಂದಿರುವ ಸಣ್ಣ ಪ್ರಾಣಿಗಳಿಂದ ಉತ್ಸತ್ತಿಯಾದ ಜೀವರಹಿತವಾದ ವಸ್ತುಗಳು. ಇವುಗಳಲ್ಲಿ ಮುತ್ತು ಉತ್ತಮ ದರ್ಜೆಗೆ ಸೇರಿದ ರತ್ನ, ಹವಳ ಕಡಿಮೆ ದರ್ಜೆಗೆ ಸೇರಿದ ರತ್ನ.
ಹವಳವು ” ಪಾಲಿಪ್’ ಎಂಬ ಸಣ್ಣ ಪ್ರಾಣಿ ಸಮುದಾಯದ ಅಸ್ತಿಸಂಜರವು. ಹವಳಗಳಲ್ಲಿ ಮುಖ್ಯವಾಗಿ ಮೂರು ಜಾತಿಯುಂಟು : ಕೆಂಪು, ಕಪ್ಪು ಮತ್ತು ಬಿಳೇಹವಳ. ಇವುಗಳಲ್ಲಿ ಕೆಂಪು ಹವಳವನ್ನು ಮಾತ್ರ ಆಭರಣಗಳಲ್ಲಿ ಉಪಯೋಗಿಸುತ್ತಾರೆ.
ಜ್ಯೋತಿಷ್ಯಾಸ್ತ್ರದ ಪ್ರಕಾರ ರತ್ನಗಳನ್ನು ಧರಿಸುವ ಬಗೆ
ಮೇಷ ರಾಶಿಗೆ ಕುಜ ಅಧಿಪತಿಯಾಗಿದ್ದು, ಈ ರಾಶಿಯವರು ಹವಳ ಪುಷ್ಯರಾಗ ಧರಿಸಬೇಕು. ತಾಮ್ರ ಅಥವಾ ಚಿನ್ನದಲ್ಲಿ ತೋರು ಅಥವಾ ಉಂಗುರ ಬೆರಳಿಗೆ ಧರಿಸಬೇಕು.
ವೃಷಭ ರಾಶಿ ಅಧಿಪತಿ ಶುಕ್ರ. ಇವರು ವಜ್ರ ನೀಲವನ್ನು ಚಿನ್ನ, ಪ್ಲಾಟಿನಂ ಅಥವಾ ಬೆಳ್ಳಿಯಲ್ಲಿ ಮಧ್ಯ ಅಥವಾ ಕಿರುಬೆರಳಿಗೆ ಧರಿಸಿಕೊಳ್ಳಬೇಕು.
ಮಿಥುನ ರಾಶಿಗೆ ಅಧಿಪತಿ ಬುಧ. ಇವರು ಪಚ್ಚೆ(ತಿಳಿಹಳದಿ)ನೀಲವನ್ನು ಕಂಚು, ಬಂಗಾರ ಅಥವಾ ಬೆಳ್ಳಿಯಲ್ಲಿ ಕಿರು ಬೆರಳಿಗೆ ಧರಿಸಬೇಕು.
ಕಟಕ ರಾಶಿಗೆ ಅಧಿಪತಿ ಚಂದ್ರ. ಇವರು ಮುತ್ತು ಅಥವಾ ಪುಷ್ಯರಾಗವನ್ನು ಬೆಳ್ಳಿ, ಚಿನ್ನದಲ್ಲಿ ತೋರು ಅಥವಾ ಉಂಗುರ ಬೆರಳಿಗೆ ಧರಿಸಿಕೊಳ್ಳಬೇಕು.
ಸಿಂಹ ರಾಶಿಗೆ ಅಧಿಪತಿ ರವಿ. ಇವರು ಮಾಣಿಕ್ಯ, ಹವಳ ಅಥವಾ ಪುಷ್ಪರಾಗವನ್ನು ತಾಮ್ಮ, ಬೆಳ್ಳಿ ಅಥವಾ ಬಂಗಾರದಲ್ಲಿ ಉಂಗುರ ಬೆರಳಿಗೆ ಧರಿಸಿಕೊಳ್ಳಬೇಕು.
ಕನ್ಯಾ ರಾಶಿಗೆ ಅಧಿಪತಿ ಬುಧ. ಇವರು ಪಚ್ಚೆ, ವಜ್ರವನ್ನು ಬಂಗಾರ, ಪ್ಲಾಟಿನಂ ಅಥವಾ ಬೆಳ್ಳಿಯಲ್ಲಿ ಕಿರು ಬೆರಳಿಗೆ ಧರಿಸಿಕೊಳ್ಳಬೇಕು.
ತುಲಾ ರಾಶಿಗೆ ಅಧಿಪತಿ ಶುಕ್ರ. ಇವರು ವಜ್ರ ಪಚ್ಚೆಯನ್ನು ಬಂಗಾರ, ಕಂಚು ಅಥವಾ ಬೆಳ್ಳಿಯಲ್ಲಿ ಮಧ್ಯ ಬೆರಳು ಅಥವಾ ಕಿರು ಬೆರಳಿಗೆ ಧರಿಸಬೇಕು.
ವೃಶ್ಚಿಕ ರಾಶಿಗೆ ಅಧಿಪತಿ ಕುಜ. ಇವರು ಹವಳ ಅಥವಾ ಮಾಣಿಕ್ಯವನ್ನು ತಾಮ್ರ ಅಥವಾ ಬಂಗಾರದಲ್ಲಿ ಉಂಗುರ ಬೆರಳಿಗೆ ಧರಿಸಬೇಕು.
ಧನು ರಾಶಿಗೆ ಅಧಿಪತಿ ಗುರು. ಪುಷ್ಯರಾಗ, ಮಾಣಿಕ್ಯ ಅಥವಾ ಹವಳವನ್ನು ಇವರು ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂನಲ್ಲಿ ತೋರುಬೆರಳಿಗೆ ಧರಿಸಿಕೊಳ್ಳಬೇಕು.
ಮಕರ ರಾಶಿಗೆ ಅಧಿಪತಿ ಶನಿ. ಇವರು ನೀಲ ಅಥವಾ ಪಚ್ಚೆಯನ್ನು ಬೆಳ್ಳಿಯಲ್ಲಿ ಮಧ್ಯದ ಬೆರಳಿಗೆ ಧರಿಸಬೇಕು.
ಕುಂಭ ರಾಶಿಗೆ ಅಧಿಪತಿ ಶನಿ. ಇವರು ನೀಲ, ವಜ್ರ ಅಥವಾ ಪಚ್ಚೆಯನ್ನು ಬೆಳ್ಳಿ, ಕಬ್ಬಿಣ ಅಥವಾ ಬಂಗಾರದಲ್ಲಿ ಮಧ್ಯದ ಬೆರಳಿಗೆ ಧರಿಸಿಕೊಳ್ಳಬೇಕು.
ಮೀನ ರಾಶಿಯವರ ಅಧಿಪತಿ ಗುರು. ಪುಷ್ಯರಾಗ, ಹವಳ ಅಥವಾ ಮಾಣಿಕ್ಯವನ್ನು ಬಂಗಾರ ಪ್ಲಾಟಿನಂ ಅಥವಾ ಬೆಳ್ಳಿಯಲ್ಲಿ ತೋರು ಬೆರಳು ಧರಿಸಿಕೊಳ್ಳಬೇಕು.
ಗುಪ್ತರ ಸಾಮ್ರಾಟ ಎರಡನೇಯ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಸುಪ್ರಸಿದ್ಧ ೯ವಿದ್ವಾಂಸರಿಗೂ ನವರತ್ನಗಳೆಂದು ಕರೆಯುತ್ತಿದ್ದರು.
ಅವರೆಂದರೆ
೧ – ಕಾಳಿದಾಸ,
೨ – ವರರುಚಿ,
೩ – ವೇತಾಲ ಭಟ್ಟ ,
೪ – ವರಾಹಮಿಹಿರ,
೫ – ಶಂಕು,
೬- ಧನ್ವಂತ್ರಿ,
೭ – ಬ್ರಹ್ಮ ಗುಪ್ತ,
೮ – ಕ್ಷಪಣಕ,
೯- ಅಮರಸಿಂಹ
ನವರತ್ನ (ಸಂಸ್ಕೃತ: नवरत्न) ಸಂಸ್ಕೃತದ ಸಂಯೋಜನಾ ಪದದ ಅರ್ಥ “ಒಂಬತ್ತು ರತ್ನಗಳು” ಎಂದು ಆಗಿದೆ. ಈ ಶೈಲಿಯಲ್ಲಿ ನವರತ್ನಗಳನ್ನು ಉಪಯೋಗಿಸಿಕೊಂಡು ರಚಿತವಾದ ಆಭರಣ ಹಿಂದೂ ಧರ್ಮ, ಜೈನ್ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್ ಧರ್ಮ ಪ್ರಮುಖ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಇತರ ಧರ್ಮಗಳ ನಡುವೆ ಹೊಂದಿದೆ. ಇಂತಹ ಪ್ರಾಮುಖ್ಯತೆ, ಒಂಬತ್ತು ರತ್ನಗಳು ಈ ಸಂಯೋಜನೆಯನ್ನು ಇತರ ಏಷಿಯಾದ ಬಹುತೇಕ ದೇಶಗಳಲ್ಲಿ, ಭಾರತ, ನೇಪಾಳ, ಶ್ರೀಲಂಕಾ, ಸಿಂಗಾಪೂರ್, ಮಯನ್ಮಾರ್, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಮಲೇಷ್ಯಾ ಸೇರಿದಂತೆ ಪವಿತ್ರ ಮತ್ತು ರಾಯಲ್ ಎಂದು ಗುರುತಿಸಲ್ಪಟ್ಟಿದೆ.