ಊಟದ ಆಟ – ಜಿ.ಪಿ.ರಾಜರತ್ನಂ ಅವರ ಪದ್ಯ

ಒಂದು ಎರಡು
ಬಾಳೆಲೆ ಹರಡು

ಮೂರು ನಾಲ್ಕು
ಅನ್ನ ಹಾಕು

ಐದು ಆರು
ಬೇಳೆ ಸಾರು

ಏಳು ಎಂಟು
ಪಲ್ಯಕೆ ದಂಟು

ಒಂಬತ್ತು ಹತ್ತು
ಎಲೆ ಮುದಿರೆತ್ತು

ಒಂದರಿಂದ ಹತ್ತು
ಹೀಗಿತ್ತು

ಊಟದ ಆಟವು
ಮುಗಿದಿತ್ತು

Leave a Reply

Your email address will not be published. Required fields are marked *