ಕನ್ನಡ ಸಾಲುಗಳು

ಕನ್ನಡ / ದೇಶ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ದೇಶಸೇವೆಯೇ ಈಶಸೇವೆ
ಈ ನಾಡು ನನ್ನದು, ಈ ದೇಶ ನನ್ನದು ಎನ್ನದ ದೇಹ ಸುಡುಗಾಡು.
ಕನ್ನಡಕ್ಕೆ ಹೋರಾಡು ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಆನಂದ-ಕುವೆಂಪು
ಯಾರು ದೇಶವನ್ನು ಪ್ರೀತಿಸಲಾರರೋ ಅವರು ಏನನ್ನೂ ಪ್ರೀತಿಸಲಾರರು
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ
ಸ್ವದೇಶೀಯ ನಿಜವಾದ ಭಕ್ತ, ಪರದೇಶೀಯ ಬಗ್ಗೆ ದ್ವೇಷ ತಳೆಯುವುದಿಲ್ಲ.
ಸೇವೆ
ಮಾನವನ ಸೇವೆಯೇ ಮಾಧವನ ಸೇವೆ.
ಜನಸೇವೆಯೇ ಜನಾರ್ಧನನ ಸೇವೆ.
ದಯವೇ ಧರ್ಮದ ಮೂಲ
ಧರ್ಮ / ಸಂಸ್ಕೃತಿ / ಮಾನವತೆ
ನಮ್ಮ ಸಂಸ್ಕೃತಿಯಲ್ಲಿ ಜೀವಿಸಬೇಕು, ಅನ್ಯ ಸಂಸ್ಕೃತಿಯನ್ನು ಪ್ರೀತಿಸಬೇಕು.
ತನ್ನ ಧರ್ಮವನ್ನು ಆರಾಧಿಸು, ಪರ ಧರ್ಮವನ್ನು ಆದರಿಸು.
ಜಗದ ಭಾಷೆ ನೂರಾದರೂ ಹೃದಯದ ಭಾಷೆ ಒಂದೆ.
ಈ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿರುವರೋ ಅಷ್ಟು ಧರ್ಮಗಳಿವೆ – ಗಾಂಧೀಜಿ
ಎಲ್ಲಾ ಧರ್ಮಗಳೂ ಸತ್ಯದ ಸಾಕ್ಷಾತ್ಕಾರವನ್ನು ಒಳಗೊಂಡಿವೆ.
ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ.
ತಪ್ಪು ಮಾಡುವುದು ಮಾನವ ಗುಣ, ಕ್ಷಮಿಸುವುದು ದೈವಿಕ ಗುಣ
ನಾವು ಎತ್ತರಕ್ಕೆ ಏರಿದ್ದೇವೆ, ಆಳಕ್ಕೆ ಇಳಿದಿದ್ದೇವೆ. ಆದರೆ ಹತ್ತಿರಕ್ಕೆ ಮಾತ್ರ ಬರಲಿಲ್ಲ.
ನಿನ್ನ ಗೆಳೆಯರನ್ನು ತೋರಿಸು, ನೀನೇನೆಂದು ನಾನು ಹೇಳುತ್ತೇನೆ – ಗಯಾಟೆ
ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ.
ಕೋತಿ ತಾನು ಕೆಡುವುದಲ್ಲದೆ, ವನವನ್ನೆಲ್ಲಾ ಕೆಡಿಸಿತು
ಅನ್ಯಾಯವನ್ನು ಕೊಲ್ಲುವುದೇ ಧರ್ಮ – ಸುಭಾಸ್ ಚಂದ್ರ ಬೋಸ್
ಜಗವೆಲ್ಲಾ ನಗುತಿರಲಿ, ಜಗದಳುವು ನನಗಿರಲಿ – ಈಶ್ವರ ಸಣಕಲ
ಒಬ್ಬರ ನೇತ್ರದಾನ, ಇಬ್ಬರ ಬಾಳಿಗೆ ಬೆಳಕು.
ಮನುಷ್ಯ ಜಾತಿ ತಾನೊಂದೇ ವಲಂ – ಪಂಪ
ವಿದ್ಯೆ / ಪುಸ್ತಕ / ಜ್ಞಾನ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು
ಗಾದೆ ವೇದಕ್ಕೆ ಸಮಾನ
ದೇಶ ಸುತ್ತಿ ನೋಡು; ಕೋಶ ಓದಿನೋಡು
ಪುಸ್ತಕವಿಲ್ಲದ ಮನೆ ಕಿಟಕಿ ಇಲ್ಲದ ಕೊಠಡಿ
ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ.
ವಿದ್ಯೆಗೆ ವಿನಯವೇ ಭೂಷಣ.
ಪುಸ್ತಕ ಅಲಂಕರಿಸಿದಂತೆ ಮತ್ತೊಂದು ವಸ್ತು ಮನೆಯನ್ನು ಅಲಂಕರಿಸದು.
ಮನೆಯ ಶ್ರೀಮಂತಿಕೆ ಆ ಮನೆಯಲ್ಲಿನ ಪುಸ್ತಕಗಳು.
ದೊಡ್ಡ ಯೋಚನೆಗಳೊಡನೆ ಇರುವವನು ಎಂದೂ ಏಕಾಂಗಿಯಲ್ಲ.
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಫಲಕೊಡುತ್ತವೆ.
ಮಾತು/ ಜಾಣತನ
ಬಾಯಿಯಿದ್ದವನು ಬರಗಾಲದಲ್ಲೂ ಬದುಕಿದ
ಜಾಣನಿಗೆ ಮಾತಿನಪೆಟ್ಟು ದಡ್ಡನಿಗೆ ದೊಣ್ಣೆಯ ಪೆಟ್ಟು.
ಉಪಾಯ ಬಲ್ಲವನಿಗೆ ಅಪಾಯವಿಲ್ಲ
ಶಕ್ತಿಗಿಂತ ಯುಕ್ತಿ ಮೇಲು
ಮಾತೇ ಮುತ್ತು ಮಾತೇ ಮೃತ್ಯು.
ಮಾತು ಬೆಳ್ಳಿ ಮೌನ ಬಂಗಾರ.
ಊಟಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳ ಇಲ್ಲ.
ಅರೋಗ್ಯ
ಆರೋಗ್ಯವೇ ಭಾಗ್ಯ
ಅಜ್ಞಾನ / ಅಹಂಕಾರ
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ.
ಅಜ್ಞಾನವೆಂಬುದು ನಾವೇ ಆರಿಸಿಕೊಂಡ ದುರಾದೃಷ್ಟ.
ಸೋಮಾರಿತನ ಆತ್ಮದ ಶತ್ರು
ಕಬ್ಬಿಣವು ತುಕ್ಕಿನಿಂದ ನಾಶವಾಗುವಂತೆ ಮಾನವನು ಅಸೂಯೆಯಿಂದ ಹಾಳಾಗುತ್ತಾನೆ – ಟಿ.ಎಸ್.ಫಯಾಸ್.
ತರಗತಿಯಲ್ಲಿ ಕಲಿತದ್ದನ್ನು ಸಮಾಜದ ಒಳಿತಿಗೆ ಬಳಸದವ ವಿದ್ಯಾವಂತನೇ ಅಲ್ಲ.
ಬೆಳಕಿನ ಅನುಪಸ್ಥಿತಿಯೇ ಕತ್ತಲು ಅಂತೆಯೇ ಜ್ಞಾನದ ಅನುಪಸ್ಥಿತಿಯೇ ಅಜ್ಞಾನ
ಸಮಯಕ್ಕೆ ಬಾರದ ಬುದ್ಧಿ ಸಾವಿರವಿದ್ದರೂ ಲದ್ದಿ.
ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ನೋಡು.
ಮಾಡುವ ಕೆಲಸವನ್ನು ಮನ ಮುಟ್ಟಿ ಮಾಡು, ಆತ್ಮ ತೃಪ್ತಿಯಿಂದ ಮಾಡು
ಹಳೆಬೇರು ಹೊಸಚಿಗುರು ಕೂಡಿರಲು ಮರ ಸೊಬಗು.
ಮಾನವ ಹೃದಯದಲ್ಲಿರುವ ಒಳಿತನ್ನು ಬಡಿದೆಬ್ಬಿಸುವವನೆ ಕವಿ.
ಆಳಾಗಬಲ್ಲವನು ಆಳುವನು ಅರಸಾಗಿ.
ಮನೆಗೆ ಮಾರಿ, ಊರಿಗೆ ಉಪಕಾರಿ
ನೀನು ಬದಲಾದರೆ ನಿನ್ನ ಅದೃಷ್ಟವೂ ಬದಲಾಗುತ್ತದೆ.
ಮನಸ್ಸಿದ್ದರೆ ಮಾರ್ಗ
ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ.
ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಅವಕಾಶ ಸಿಕ್ಕರೆ ಆಕಾಶವನ್ನು ಮುಟ್ಟು.
ಅನುಕೂಲವಿದ್ದರೆ ಎಲ್ಲರೂ ನಾಯಕರೇ.
ಹನಿಹನಿ ಕೂಡಿದರೆ ಹಳ್ಳ ತೆನೆ ತೆನೆ ಗೂಡಿದರೆ ಬಳ್ಳ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ತುಂಬಿದ ಕೊಡ ತುಳುಕುವುದಿಲ್ಲ
ಮಂತ್ರಕ್ಕೆ ಮಾವಿನಕಾಯಿ ಬೀಳುವುದಿಲ್ಲ
ಕೂತು ತಿಂದರೆ ಕುಡಿಕೆ ಹಣ ಸಾಲದು
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
ಹಾಸಿಗೆ ಇದ್ದಷ್ಟು ಕಾಲು ಚಾಚು.
ಅತಿ ಆಸೆ ಗತಿಗೇಡು.
ಕೈ ಕೆಸರಾದರೆ ಬಾಯಿ ಮೊಸರು – ಗಾದೆ.
ಕಾಯಕವೇ ಕೈಲಾಸ
ಕದ್ದು ತಿನ್ನುವುದಕ್ಕಿಂತ ಬೇಡಿ ತಿನ್ನುವುದು ಲೇಸು
ಬೇಡಿ ತಿನ್ನುವುದಕ್ಕಿಂತ ದುಡಿದು ತಿನ್ನುವುದನ್ನು ಕಲಿ
ಎತ್ತಿನಂತೆ ದುಡಿದು, ಇಲಿಯಂತೆ ತಿನ್ನಬೇಕು.
ಒಳ್ಳೆಯ ಮಾತನ್ನು ಯಾರೇ ಆಡಲಿ, ಅದಕ್ಕೆ ಮನ್ನಣೆ ನೀಡು – ಗಯಟೆ
ಸತ್ಯದ ಭಯವೇ ನಮ್ಮನ್ನು ನಿಯಂತ್ರಿಸುವ ಶಕ್ತಿ – ಹೆನ್ರಿ ಫೆಡ್ರಿಕ್
ದುಡಿಯದೆ ತಿನ್ನಬಾರದು, ಉಣ್ಣದೆ ಮಲಗಬಾರದು.
ಒಂದು ಕಾಲು ಹೊರಗೆ, ಒಂದು ಕಾಲು ಒಳಗೆ
ಎಡವಿದ ಕಾಲಿಗಿಂತ, ಎಡವಿದ ನಾಲಿಗೆ ಅಪಾಯ.
ಮನಸ್ಸು ಮಲಿನವಾದರೆ ಮನುಷ್ಯನೇ ಮಲಿನವಾದಂತೆ.
ನಾಲಿಗೆ ಒಳ್ಳೆಯದಾದರೆ, ನಾಡೆಲ್ಲಾ ಒಳ್ಳೆಯದು
ನಿನ್ನ ಉಡುಪು ನಿನ್ನ ವ್ಯಕ್ತಿತ್ವದ ಮೆರುಗು
ಎಲ್ಲರ ಕೆಲಸ ಎಂದರೆ, ಯಾರ ಕೆಲಸವೂ ಅಲ್ಲ.
ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.
ಮಂತ್ರಕ್ಕೆ ಮಾವಿನಕಾಯಿ ಉದುರುವುದೇ?
ಕನ್ನಡಿಯಲ್ಲಿ ನಮ್ಮ ಮುಖ ಕಾಣಬಹುದು ಆದರೆ ನಮ್ಮ ಚಾರಿತ್ರ್ಯ ಕಾಣುವುದಿಲ್ಲ.
ಕಷ್ಟ ಮನುಷ್ಯನಿಗೆ ಬಾರದೆ ಮರಕ್ಕೆ ಬರುತ್ತದೆಯೇ
ಆಕಳು ಕಪ್ಪಾದರೆ ಹಾಲು ಕಪ್ಪೇ?
ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
ಒಳ್ಳೆಯ ಮಾತು ಕೇಳದವನು, ಕಿವಿ ಇದ್ದರೂ ಕಿವುಡ
ಕಷ್ಟದಿಂದ ಮೇಲಕ್ಕೆ ಬಾ ಕೆಳಗೆ ಬೀಳುತ್ತೇನೆಂಬ ಭಯವಿರುವುದಿಲ್ಲ.
ಸ್ನೇಹಿತನನ್ನು ನಿಧಾನವಾಗಿಯೇ ಆರಿಸು, ಅವನನ್ನು ಬದಲಿಸುವಾಗ ಇನ್ನೂ ನಿಧಾನಿಸು.
ಶಕ್ತನಾದರೆ ನೆಂಟರೆಲ್ಲಾ ಹಿತರು, ಅಶಕ್ತನಾದರೆ ಆಪ್ತ ಜನರೇ ವೈರಿಗಳು.
ಶುದ್ಧ ಹಾಗೂ ಸತ್ಯದ ದೃಷ್ಟಿಯಿಂದ ನಮ್ಮ ಶರೀರವೂ ಒಂದು ಆಸ್ತಿಯೆನಿಸುತ್ತದೆ.
ಸಮಾಜ /ಕರ್ತವ್ಯ
ಸಮಾಜದ ಅಭಿವೃದ್ಧಿಗೆ ಸದುಪಯೋಗವಾಗದ ಶಿಕ್ಷಣಕ್ಕೆ ಬೆಲೆಯಿಲ್ಲ.
ಸಾರ್ವಜನಿಕ ಕೆಲಸಗಳನ್ನು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡು.
ವ್ಯಕ್ತಿಯ ಕಲ್ಯಾಣವು ಸಕಲರ ಕಲ್ಯಾಣದಲ್ಲಿ ಅಡಕವಾಗಿದೆ – ಗಾಂಧೀಜಿ
ಹಕ್ಕುಗಳನ್ನು ಪಡೆದು, ಕರ್ತವ್ಯ ಮರೆತರೆ ಅರಾಜಕತೆ ಉಂಟಾಗುತ್ತದೆ.
ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು.
ಕರ್ತವ್ಯಗಳನ್ನು ಮೊದಲು ಮಾಡು, ಹಕ್ಕುಗಳು ತಾವಾಗಿಯೇ ಬರುತ್ತವೆ.
ನೀತಿಯನ್ನು ಪಾಲಿಸುವುದರಿಂದ ಮಾತ್ರ ನಾವು ಸುಖಿಗಳಾಗಬಲ್ಲೆವು – ಗಾಂಧೀಜಿ
ನಮ್ಮ ಕಾರ್ಯಗಳೆಲ್ಲವೂ ಸತ್ಯವನ್ನೇ ಕೇಂದ್ರವಾಗಿಟ್ಟುಕೊಂಡು ಸಾಗಬೇಕು.
ಜಗತ್ತಿಗೆ ಅವಶ್ಯವಿರುವ ವಸ್ತುವನ್ನು ತಾನೊಬ್ಬನೇ ಸಂಗ್ರಹಿಸಿಕೊಳ್ಳುವುದು ಹಿಂಸೆಯೇ.
ಶ್ರಮ ಮಾಡದ ಮನುಷ್ಯನಿಗೆ, ಊಟ ಮಾಡುವ ಹಕ್ಕು ಇರುವುದಿಲ್ಲ.
ಶಾರೀರಿಕ ಬೇಡಿಕೆಗಳು ಶಾರೀರಿಕ ಶ್ರಮದಿಂದಲೇ ಪೂರೈಸಲ್ಪಡಬೇಕು.
ಜನ್ಮತಃ ಯಾರೂ ಅಸ್ಪೃಶ್ಯರಾಗಿ ಹುಟ್ಟುವುದು ಶಕ್ಯವಿಲ್ಲ.
ಮಾನವರೆಲ್ಲರೂ ಸಮಾನರಾಗಿಯೇ ಜನ್ಮ ತಾಳಿದ್ದಾರೆ.
ಬಾಲ್ಯ
ಬಾಲ್ಯದ ನೆನಪು ಬಾಡದು
ಬಾಲ್ಯದ ನೆನಪಿನ ಸವಿ ಬರುವನು ಅರಸುತ ರವಿ
ಪ್ರಕೃತಿ
ಪ್ರಕೃತಿಯ ತೋರಣ-ಸಂತಸಕೆ ಕಾರಣ
ಜಾಲೀಯ ಮರವು ನೆರಳಲ್ಲ ಮಗಳೆ, ತಾಯೀಯ ಮನೆಯು ಸ್ಥಿರವಲ್ಲ
ಜಾಲಿಯ ಹಾಕಿದರೆ ಕಾಲಿಗೆ ಮೂಲ
ಕಾಡು ಬೆಳೆಸಿ ನಾಡು ಉಳಿಸಿ
ಮಳೆಯಿಂದಲೇ ಇಳೆ – ಇಳೆಯಿಂದಲೇ ಬೆಳೆ
ಸಾವಯವ ಕೃಷಿ; ಜೀವನಕ್ಕೆ ಖುಷಿ
ಮರ ತಾನು ಬಿಸಿಲಲ್ಲಿ ನಿಂತರೂ ಅನ್ಯರಿಗೆ ನೆರಳನ್ನೇ ನೀಡುತ್ತದೆ.
ತಾಯಿ
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
ತಾಯಿ ಮತ್ತು ತಾಯಿನಾಡು ಇವು ಸ್ವರ್ಗಕ್ಕಿಂತಲೂ ಮಿಗಿಲು
ತಾಯಿಗಿಂತ ಬಂಧುವಿಲ್ಲ – ಉಪ್ಪಿಗಿಂತ ರುಚಿಯಿಲ್ಲ
ಹತ್ತು ದೇವರನ್ನು ಪೂಜಿಸುವ ಮುನ್ನ, ಹೆತ್ತ ತಾಯಿಯನ್ನು ಪೂಜಿಸು.
ತಾಯಿದ್ರೆ ತವರೆಚ್ಚು-ತಂದಿದ್ರೆ ಬಳಗೆಚ್ಚು
ಮನೆಯೆ ಮೊದಲ ಪಾಠಶಾಲೆ, ತಾಯಿಯೆ ಮೊದಲ ಗುರು.
ಒಂದು ನೂರು ಶಿಕ್ಷಕರಿಗಿಂತ ಒಬ್ಬಳು ಜಾಣ ತಾಯಿ ಮೇಲು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.