ಪೂರ್ಣಚಂದ್ರ ತೇಜಸ್ವಿಯವರ ನುಡಿಗಳು
ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವದಿಲ್ಲ
ಟೀಕೆಗಳಿಗೆ ನಮ್ಮ ಜೀವನ, ವ್ಯಕ್ತಿತ್ವ, ನಡವಳಿಕೆಗಳೇ ಉತ್ತರ ಹೇಳಬೇಕೆ ಹೊರತು ಮಾತಿನಿಂದ ಹೇಳಿ ಪ್ರಯೋಜನವಿಲ್ಲ
ಇಡೀ ವಿಶ್ವ ಒಂದಕ್ಕೊಂದು ಬಿಗಿದುಕೊಂಡಿರೋ ಸಮತೋಲನದಲ್ಲಿ ನಿಂತಿರೋ ಬಲೆ
ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವದಿಲ್ಲ
ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದ್ದನ್ನ ನೋಡಿ ಅಚ್ಚರಿಪಡುತ್ತಾ ಇದ್ದುಬಿಡುವುದು ಒಳ್ಳೆಯದು
ಕಾಡುಗಳನ್ನು ನಾಶ ಮಾಡಿದಾಗ ಅಲ್ಲಿರುವ ಪ್ರಾಣಿಗಳನ್ನೂ, ಅವುಗಳ ಪರಿಸರವನ್ನೂ ಧ್ವಂಸ ಮಾಡಿದಾಗ ರಹಸ್ಯ, ಗೌಪ್ಯ, ಅದ್ಭುತಗಳ ನಿರಂತರ ನಿಧಿಯೊಂದನ್ನು ನಮ್ಮ ಕಿರಿಯ ಜನಾಂಗ ಕಳೆದುಕೊಳ್ಳುತ್ತದೆ.
ಪರಿಸರದ ಕತೆ ಪುಸ್ತಕದಿಂದ